Thursday, January 1, 2009

ಒಂದೇ ರಾಕೆಟ್ನಲ್ಲಿ ಹತ್ತು ಉಪಗ್ರಹಗಳ ಉಡಾವಣೆ: ಬಾಹ್ಯಾಕಾಶ ಸಂಸ್ಥೆ ಇಸ್ತ್ರೋ ಮತ್ತೊಂದು ಹೆಜ್ಜೆ




ಈ ಬಾರಿ ಹತ್ತು ಉಪಗ್ರಹಗಳನ್ನು ಇಸ್ತ್ರೋ ಸಂಸ್ಥೆಯು ಒಂದೇ ರಾಕೆಟ್ ವಾಹನದಲ್ಲಿ ಅಂತರಿಕ್ಷಕ್ಕೆ ಯಶಸ್ವಿಯಾಗಿ ಕಳುಹಿಸಿರುವುದು ಎಲ್ಲೆಡೆ ಸುದ್ದಿಯಾಗಿದೆ. 230 ಟನ್ ತೂಕದ ಪಿಎಸ್ಎಲ್ವಿ-ಸಿ9 ಹೆಸರಿನ ರಾಕೆಟ್, 824 ಕೆಜಿ ತೂಕವಿರುವ ಹತ್ತು ಉಪಗ್ರಹಗಳ ಭಾರವನ್ನು ಹೊತ್ತೊಯ್ದಿತು. ಭೂಮಿಯಿಂದ 637 ಕಿ.ಮೀ ಎತ್ತರದಲ್ಲಿ ರುವ ಭೂಮಿಯ ಸುತ್ತಲೂ ಇರುವ ಅಂತರಿಕ್ಷದ ಕಕ್ಷೆಗೆ ಹತ್ತು ಉಪಗ್ರಹಗಳನ್ನು ತಲುಪಿಸಿತು. ಉಪಗ್ರಹವು ಅನುಸರಿಸುವ ಪಥವನ್ನು ಕಕ್ಷೆಯೆನ್ನುತ್ತಾರೆ. ಹೀಗೆ ಉಡಾವಣೆಗೊಂಡ ಎಲ್ಲ ಉಪಗ್ರಹಗಳು ಭೂಮಿಯ ಮೇಲಿನ ನಿಯಂತ್ರಣ ಕೇಂದ್ರಗಳಿಗೆ ಸಂದೇಶ ರವಾನಿಸುತ್ತಿವೆ. ಭಾರತ ಇದೇ ಪ್ರಥಮ ಸಲ ಒಂದೇ ಬಾರಿಗೆ ಹತ್ತು ಉಪಗ್ರಹಗಳನ್ನು ಉಡ್ಡಯನ ಮಾಡಿರುವುದು. ಅತಿ ಹೆಚ್ಚು ತೂಕದ ಉಪಗ್ರಹಗಳನ್ನು ಕಳುಹಿಸಿರುವುದು ವಿಶ್ವ ದಾಖಲೆಯೇ ಸರಿ. ಈ ಹಿಂದೆ, 2007ರಲ್ಲಿ ಒಟ್ಟು 300 ಕೆಜಿ ತೂಕವುಳ್ಳ 16 ಉಪಗ್ರಹಗಳನ್ನು ರಷ್ಯಾ ಉಡ್ಡಯನ ಮಾಡಿತ್ತು.
ಪಿಎಸ್ಎಲ್ವಿ-ಸಿ9 ರಾಕೆಟ್ ಉಡಾವಣೆ: ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಪಿಎಸ್ಎಲ್ವಿ-ಸಿ9 ರಾಕೆಟ್ ಒಟ್ಟು 1,151 ಸೆಕೆಂಡ್ಗಳ ಕಾಲ ಪಯಣಿಸಿತು. ಇದರಲ್ಲಿ ಭಾರತದ್ದೇ ಆದ 690 ಕೆಜಿ ತೂಕದ ಕಾಟರ್ೋಸ್ಯಾಟ್-2ಎ ಮತ್ತು 83 ಕೆಜಿ ತೂಕದ ಇಂಡಿಯನ್ ಮಿನಿ ಸ್ಯಾಟಲೈಟ್-1 (ಐಎಂಎಸ್-1) ಎಂಬ ಎರಡು ದೂರ-ಸಂವೇದಿ ಉಪಗ್ರಹಗಳನ್ನು ಸಹ ಇದ್ದವು. ಉಳಿದವು ಕೆನಡಾ ಮತ್ತು ಜರ್ಮನಿಯ ವಿಶ್ವವಿದ್ಯಾನಿಲಯಗಳು ಸಿದ್ದಪಡಿಸಿದ್ದ ಎಂಟು ನ್ಯಾನೋ ಉಪಗ್ರಹಗಳು. ಕಾಟರ್ೋಸ್ಯಾಟ್-2ಎ ಉಪಗ್ರಹದಲ್ಲಿ ಅತ್ಯಾಧುನಿಕ ಗುಣಮಟ್ಟದ ಪಾನ್ಕ್ರೋಮ್ಯಾಟಿಕ್ ಕ್ಯಾಮೆರಾ ಇದ್ದು, ಅದರಿಂದ ದೊರೆಯುವ ಒಂದು ಮೀಟರ್ ಅಂತರದ ಚಿತ್ರಗಳನ್ನು ನಗರ ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳು, ವತರ್ುಲ ರಸ್ತೆಗಳು, ವಸತಿಗೃಹ ಪ್ರದೇಶಗಳಂಥಹ ಮ್ಯಾಪಿಂಗ್ ಕಾರ್ಯಗಳಿಗೆ ಬಳಸಬಹುದು. ಐಎಂಎಸ್-1 ಉಪಗ್ರಹದಲ್ಲಿ ಎರಡು ಕ್ಯಾಮೆರಾಗಳಿದ್ದು, ಇದು ಎರಡು ವರ್ಷಗಳವರೆಗೂ ಬಾಳಿಕೆ ಬರುವಂತೆ ವಿನ್ಯಾಸಗೊಳಿಸಲಾಗಿದೆ.
ಕೆನಡಾ ಮತ್ತು ಜರ್ಮನಿ ದೇಶದ ವಿಶ್ವವಿದ್ಯಾಲಗಳು ಹಾರಿಬಿಟ್ಟಿರುವ ಉಪಗ್ರಹಗಳಿಂದ ಉತ್ತೇಜಿತಗೊಂಡಿರುವ ಇತರೆ ರಾಷ್ಟ್ರಗಳ ಹಲವಾರು ವಿಶ್ವವಿದ್ಯಾಲಯಗಳು ಕೂಡ ಉಪಗ್ರಹ ಉಡ್ಡಯನ ಯೋಜನೆಯನ್ನು ಹಾಕಿಕೊಂಡಿವೆ. ನಮ್ಮ ದೇಶದ ಐಐಟಿ-ಕಾನ್ಪುರ ಸಂಸ್ಥೆಯು ಕೂಡ ಅಂಥಹದೊಂದು ಯೋಜನೆಯಲ್ಲಿ ನಿರತವಾಗಿದೆ.
ಇಸ್ತ್ರೋ ಮತ್ತು ಪಿಎಸ್ಎಲ್ವಿ ರಾಕೆಟ್ಗಳು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ತ್ರೋ)ಯು ಸಿದ್ದಪಡಿಸಿರುವ ಈ ರಾಕೆಟ್ಗೆ ಪಿಎಸ್ಎಲ್ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಎಂದು ಹೆಸರು. ಬೆಂಗಳೂರಿನಲ್ಲಿರುವ ಇಸ್ತ್ರೋ ಉಪಗ್ರಹ ಕೇಂದ್ರವು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾಗಿದ್ದು ಉಪಗ್ರಹ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕೇಂದ್ರ. ಎಲ್ಲ ಭಾರತೀಯ ಉಪಗ್ರಹಗಳ ವಿನ್ಯಾಸ, ತಯಾರಿಕೆ, ಜೋಡಣೆ, ಪರೀಕ್ಷಣೆ ಹಾಗೂ ಉಡಾವಣಾ ಪೂರ್ವ ಮತ್ತು ಉಡಾವಣಾ ನಂತರದ ಕಾರ್ಯಯೋಜನೆಗಳು ಈ ಕೇಂದ್ರದ ಮುಖ್ಯ ಕಾರ್ಯಗಳಾಗಿವೆ. ಇದುವರೆಗೆ 45 ಉಪಗ್ರಹಗಳನ್ನು ಈ ಸಂಸ್ಥೆಯು ತಯಾರಿಸಿದ್ದು, ಇದರಲ್ಲಿ ಸಂಪರ್ಕ, ದೂರಸಂವೇದಿ ಉಪಗ್ರಹಗಳಲ್ಲದೆ ವೈಜ್ಞಾನಿಕ ಪ್ರಯೋಗಗಳಿಗೆ ಮೀಸಲಾದ ಉಪಗ್ರಹಗಳೂ ಸೇರಿವೆ.
ಪ್ರಥಮ ಬಾರಿಗೆ ಪಿಎಸ್ಎಲ್ವಿ ಮಾದರಿಯ ರಾಕೆಟ್ನ್ನು ಇಸ್ತ್ರೋ ಸಂಸ್ಥೆಯು 1994ರಲ್ಲಿ ಯಶಸ್ವಿಯಾಗಿ ಹಾರಿಬಿಟ್ಟಿತ್ತು. ಅಲ್ಲಿಂದೀಚೆಗೆ ಒಟ್ಟು 13 ಬಾರಿ ಉಡಾವಣೆಗೊಂಡಿರುವ ಈ ಮಾದರಿಯ ರಾಕೆಟ್ಗಳು ಒಂದು ಬಾರಿಯಷ್ಟೆ ವಿಫಲವಾಗಿವೆ. ಈ ವಾಹನಗಳ ಯಶಸ್ಸಿನಿಂದಾಗಿ ಭಾರತವು ಹಲವಾರು ಭೂಮಿ-ಸವರ್ೇಕ್ಷಣಾ ಉಪಗ್ರಹಗಳನ್ನು ಉಡಾವಣೆ ಮಾಡಲು ಸಾಧ್ಯವಾಗಿದೆ. ಭೂಮಿ-ಸವರ್ೇಕ್ಷಣಾ ಉಪಗ್ರಹಗಳು ನಮಗೆ ಅಗಾಧ ಪ್ರಮಾಣದಲ್ಲಿ ಉಪಯುಕ್ತವೆನಿಸಿವೆ. ಬೆಳೆ ವಿಸ್ತೀರ್ಣದ ಅಂದಾಜು ಲೆಕ್ಕವನ್ನು ಉತ್ತಮವಾಗಿ ನೀಡುತ್ತಿವೆ, ಬರಪೀಡಿತ ವಲಯಗಳ ಗುರುತು ಹಚ್ಚುವುದು, ಅರಣ್ಯ ನಾಶ ಕುರಿತ ಮಾಹಿತಿ, ನೈಸಗರ್ಿಕ ವಿಕೋಪ ಪರಿಹಾರ ಕಾರ್ಯಗಳಿಗೆ ಮಾಹಿತಿ ನೀಡುತ್ತಿವೆ, ಇತ್ಯಾದಿ.
ಪಿಎಸ್ಎಲ್ವಿ ಮಾದರಿಯ ರಾಕೆಟ್ಗಳು ಭಾರತದ ಉಪಗ್ರಹ ಉಡಾವಣೆಯಲ್ಲಿ ಬೆನ್ನೆಲುಬಾಗಿದ್ದರೂ, ಜಾಗತಿಕ ಉಪಗ್ರಹ ಉಡಾವಣೆ ಮಾರುಕಟ್ಟೆಯಲ್ಲಿ ಭಾರತವಿನ್ನೂ ಅಂಬೆಗಾಲು ಇಡುತ್ತಿದೆ. ಏಕೆಂದರೆ, ಯೂರೋಪಿನ ಏರಿಯಾನ್ 5 ರಂಥಹ ರಾಕೆಟ್ಗಳು ಅಗಾಧ ಭಾರದ ಸಂವಹನ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ ಸಾಮಥ್ರ್ಯ ಹೊಂದಿವೆ. ಇಂಥಹ ಮಾರುಕಟ್ಟೆ ವ್ಯಾಪ್ತಿಯಲ್ಲಿ ಭಾರತದ ಪಿಎಸ್ಎಲ್ವಿ ಮತ್ತು ಜಿಎಸ್ಎಲ್ವಿ (ಭೂ-ಸ್ಥಿರ ಉಪಗ್ರಹ ಉಡಾವಣಾ ವಾಹನ) ರಾಕೆಟ್ಗಳು ಸ್ಪಧರ್ಿಸಲಾರವು. ಅತಿ ಹೆಚ್ಚು ತೂಕ ಹೊರುವ ಮತ್ತು ಅತ್ಯಾಧುನಿಕ ಗುಣಮಟ್ಟದ ರಾಕೆಟ್ಗಳು ಅವಶ್ಯವಿರುವ ಸ್ಪಧರ್ಾತ್ಮಕ ಮಾರುಕಟ್ಟೆಗೆ ಭಾರತ ಪ್ರವೇಶಿಸಬೇಕಾದರೆ ಇನ್ನೆರಡು ವರ್ಷಗಳಲ್ಲಿ ಸಿದ್ದಗೊಳ್ಳುವ ಜಿಎಸ್ಎಲ್ವಿ ಮಾಕರ್್-3 ಯಶಸ್ಸುಗೊಂಡ ನಂತರವಷ್ಟೆ ಸಾಧ್ಯ.
ಚಂದ್ರಯಾನ - 1 :ಇದೇ ವರ್ಷದ ಕೊನೆಯ ಭಾಗದಲ್ಲಿ 500 ಕೆಜಿ ತೂಕದ ಉಪಗ್ರಹವನ್ನು ಉಡಾವಣೆ ಮಾಡಲು ಇಸ್ತ್ರೋ ಸಿದ್ದತೆ ನಡೆಸಿದೆ. ಚಂದ್ರನಲ್ಲಿರುವ ನೆಲದ ಮೇಲ್ಮೈಯನ್ನು ಶೋಧಿಸಿ ಅದರ ಚಿತ್ರಣ ಕುರಿತಂತೆ ಮಾಹಿತಿ ಮತ್ತು ಚಿತ್ರಗಳನ್ನು ತರಲು ಚಂದ್ರಯಾನ - 1 ಎಂಬ ಹೆಸರಿನ ಯೋಜನೆಯನ್ನು ಇಸ್ತ್ರೋ ರೂಪಿಸಿದೆ.

No comments: