Thursday, January 1, 2009

ಪರಿಸರವನ್ನು ಹಾಳುಗೆಡಹುತ್ತಿರುವ ಡಿಸ್ಟಿಲರಿ ಕೈಗಾರಿಕೆಗಳ ತ್ಯಾಜ್ಯ ನೀರು ಮತ್ತು ಅದರ ಬಯೋ-ಕಾಂಪೋಸ್ಟಿಂಗ್ ಎಂಬ ಹೆಮ್ಮಾರಿ


ಚಿತ್ರ: ಬೋರ್ವೆಲ್ ನಿಂದ ಹೊರಬರುತ್ತಿರುವ ಕೆಂಪು ಕಲುಷಿತ ನೀರು.ನಿಸರ್ಗ ಪ್ರತಿಯೊಬ್ಬ ಮನುಷ್ಯನ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಹೊರತು ಪ್ರತಿಯೊಬ್ಬನ ದುರಾಸೆಯನ್ನಲ್ಲ.


- ಮಹಾತ್ಮ ಗಾಂಧಿ.


ಜಾಗತೀಕರಣದ ಇಂದಿನ ಯುಗದಲ್ಲಿ ಒಂದೆಡೆ 'ಆರ್ಥಿಕಾಭಿವೃದ್ಧಿ' ಹಾಗೂ ವಿಪುಲ ಉದ್ಯೋಗವಕಾಶ'ಗಳ ಹೊದಿಕೆ ಹೊದ್ದಿರುವ ಅತ್ಯಂತ ಹೆಚ್ಚು ಮಲಿನಕಾರಕ ಕಾಖರ್ಾನೆಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಸ್ಥಾಪಿಸಲಾಗುತ್ತಿದೆ. ಮತ್ತೊಂದೆಡೆ ಎಲ್ಲ ಕೈಗಾರಿಕೆಗಳು ಸಹ ಮಾಲಿನ್ಯವುಂಟು ಮಾಡುವುದರಿಂದ ಯಾವುದೇ ಕೈಗಾರಿಕೆ ಸ್ಥಾಪನೆಗೂ ಅವಕಾಶ ಕೂಡದು ಎಂದು ಅಭಿವೃದ್ಧಿ-ವಿರೋಧಿ ನಿಲುವು ತಳೆಯುತ್ತಿರುವ ಪರಿಸರವಾದಿಗಳ ಕೂಗು. ಈವೆರಡೂ ಸಂಘರ್ಷದ ನಡುವೆ ಪರಿಸರ ಸಂರಕ್ಷಣೆಯ ನೈಜ ಕೂಗು ಯಾರ ಕಿವಿಯ ಮೇಲೂ ಬೀಳದೆ, ಅಭಿವೃದ್ಧಿಯೆಂಬ ಭ್ರಮಾ ಲೋಕದ ಭಯಾನಕ ಹಡಗನ್ನೇರಿ ಕೇಂದ್ರ ಮತ್ತು ರಾಜ್ಯ ಸಕರ್ಾರಗಳೆರಡೂ ನೆಲ, ಜಲ, ಅರಣ್ಯ ಸಂಪತ್ತು ಮತ್ತು ನೈಸಗರ್ಿಕ ಸಂಪನ್ಮೂಲಗಳನ್ನು ಬಂಡವಾಳಿಗರು ಕೊಳ್ಳೆಹೊಡೆದು ಬರಿದು ಮಾಡುವಂಥಹ ನೀತಿಗಳನ್ನು ಅನುಸರಿಸುತ್ತಲಿವೆ. ಭಾರತದಲ್ಲಿ ಸುಮಾರು 350 ಕ್ಕೂ ಹೆಚ್ಚು ಡಿಸ್ಟಿಲರಿ ಕೈಗಾರಿಕೆಗಳಿದ್ದು ಕನರ್ಾಟಕ ರಾಜ್ಯದಲ್ಲೇ 40ಕ್ಕೂ ಅಧಿಕ ಡಿಸ್ಟಿಲರಿ ಕೈಗಾರಿಕೆಗಳಿವೆ. ಡಿಸ್ಟಿಲರಿ ಕೈಗಾರಿಕೆಗಳಿಗೆ ಕಚ್ಛಾ ವಸ್ತುವೆಂದರೆ ಸಕ್ಕರೆ ಕಾಖರ್ಾನೆಗಳಿಂದ ಉಪಉತ್ಪನ್ನವಾಗುವ ಮೊಲಾಸಸ್ ಎಂಬ ಮಡ್ಡಿ. ಅದನ್ನು ಬಳಸಿಕೊಂಡು ಎಥೆನಾಲ್ (ಮಧ್ಯಸಾರ)ನ್ನು ತಯಾರಿಸುವ ಡಿಸ್ಟಿಲರಿ ಕೈಗಾರಿಕೆಗಳಿಂದ ಪ್ರತಿ ಲೀಟರ್ ಎಥೆನಾಲ್ ಉತ್ಪನ್ನ ತಯಾರಿಕೆಯಲ್ಲಿ 15 ಲೀಟರ್ ಕಲುಷಿತ ತ್ಯಾಜ್ಯ ನೀರು ಬಿಡುಗಡೆಯಾಗುತ್ತದೆ. ಇದು ಅತಿ ಹೆಚ್ಚು ಮಲಿನಕಾರಕ ಅಂಶಗಳನ್ನು ಹೊಂದಿದ್ದು ಇದನ್ನು ಸಂಸ್ಕರಿಸದೆ ಹಾಗೆಯೇ ಹೊರಗಿನ ಮಣ್ಣು ಅಥವಾ ಜಲಮೂಲಗಳಿಗೆ ಹಾಯಿಸಿದಲ್ಲಿ ಅಂತರ್ಜಲ ಮಾಲಿನ್ಯ, ಮಣ್ಣಿನ ಮಲಿನತೆ, ಕೃಷಿ ಬೆಳೆ ಹಾನಿ, ವಾಯು ಮಾಲಿನ್ಯ ಮುಂತಾದ ದುಷ್ಪರಿಣಾಮಗಳು ಕಟ್ಟಿಟ್ಟ ಬುತ್ತಿಯೇ ಸರಿ. ಇಂಥಹ ಕೈಗಾರಿಕಾ ಮಾಲೀಕರು ರಾಜಕೀಯವಾಗಿ ಹಾಗೂ ಆಥರ್ಿಕವಾಗಿ ಬಲಾಢ್ಯವಾಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಮಟ್ಟದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳ ಮೇಲೂ ಪ್ರಭಾವ ಬೀರುವ ತಾಕತ್ತು ಮತ್ತು ಭಂಡಗಾರಿಕೆ ಅವುಗಳಲ್ಲಿರುವುದರಿಂದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅನುಮೋದನೆ ಪಡೆದುಕೊಂಡು ಕಾಖರ್ಾನೆ ನಡೆಸುತ್ತಿವೆ. ನಮ್ಮ ದೇಶದಲ್ಲಿ ಸಕ್ಕರೆ ಕಾಖರ್ಾನೆಗಳು ರೈತರು ತಕ್ಕಮಟ್ಟಿಗಾದರೂ ಒಂದಷ್ಟು ಕಾಸು ನೋಡುವ ಭಾಗ್ಯವೊದಗಿಸಿದ್ದವು. ಆದರೆ ಜಾಗತೀಕರಣದ ಮಾರುಕಟ್ಟೆ ಪೈಪೋಟಿಯಿಂದಾಗಿ ಒಂದೆಡೆ ಸಕ್ಕರೆ ಕಾಖರ್ಾನೆಗಳು ಕಡಿಮೆ ಬೆಲೆಯ ಸಕ್ಕರೆ ಆಮದಿನಿಂದ ಸ್ಪಧರ್ೆ ಎದುರಿಸಲಾಗದೆ ಮುಚ್ಚಿ ಹೋಗುತ್ತಾ ರೈತರನ್ನು ಸಹ ತಮ್ಮೊಡನೆ ಪಾತಾಳಕ್ಕೆ ಎಳೆದೊಯ್ಯತೊಡಗಿದವು. ರಾಜ್ಯದ ಬಹುತೇಕ ಸಹಕಾರಿ ಸಕ್ಕರೆ ಕಾಖರ್ಾನೆಗಳು ಆಳುವ ವರ್ಗದ ದುರಾಡಳಿತದಿಂದಾಗಿ ನಶಿಸತೊಡಗಿದ್ದರೆ, ಖಾಸಗಿ ಸಕ್ಕರೆ ಕಾಖರ್ಾನೆಗಳು ಉನ್ನತ ತಂತ್ರಜ್ಞಾನ ಅಳವಡಿಕೆ, ಸಕ್ಕರೆ ಉತ್ಪನ್ನದೊಡನೆ ಎಥೆನಾಲ್ & ವಿದ್ಯುತ್ ಉತ್ಪಾದನೆ, ಮುಂತಾದ ಕ್ರಮಗಳಿಂದ ಯಶಸ್ವಿಯಾಗಿ ಮುನ್ನಡೆಯತೊಡಗಿದ್ದರೂ ರೈತರ ಸ್ಥಿತಿ ಮಾತ್ರ: 'ಎದುದ್ದ ಸಾಲ, ಮಂಡಿಯುದ್ದ ಕಬ್ಬು'.

ಅಪಾಯಕಾರಿ ತ್ಯಾಜ್ಯ ನೀರು:


ಡಿಸ್ಟಿಲರಿ ಕಾಖರ್ಾನೆಯಿಂದ ವಿಸಜರ್ಿಸಲಾಗುವ ಸ್ಪೆಂಟ್ ವಾಷ್ (ಕಲುಷಿತ ತ್ಯಾಜ್ಯ ನೀರು) ನ್ನು ಸಂಸ್ಕರಿಸಿ ಹಲವು ತಿಂಗಳುಗಳ ಕಾಲ ಕಾಂಪೊಸ್ಟಿಂಗ್ ಘಟಕದ ದೊಡ್ಡ ದೊಡ್ಡ ಗುಂಡಿಗಳಲ್ಲಿ ತಂಗಿಸಿ, ಅದನ್ನು ಸಕ್ಕರೆ ಕಾಖರ್ಾನೆಯ ಪ್ರೆಸ್ ಮಡ್ನೊಂದಿಗೆ ಮಿಶ್ರಣ ಮಾಡಿ ಗೊಬ್ಬರ ತಯಾರಿಸಲಾಗುತ್ತದೆ. ಈ ಸ್ಪೆಂಟ್ ವಾಷ್ ಕಲುಷಿತ ನೀರು ಕಂದು ಬಣ್ಣದ್ದಾಗಿದ್ದು, ಹೆಚ್ಚಿನ ತಾಪ, ಕಡಿಮೆ ಪಿ.ಹೆಚ್, ಕರಗಿರುವ ರಾಸಾಯನಿಕ ಮತ್ತು ರಾಸಾಯನಿಕೇತರ ಅಂಶಗಳಿಂದ ಕೂಡಿರುತ್ತದೆ. ಇದರಲ್ಲಿ ಕಬ್ಬಿಣ, ಮ್ಯಾಂಗನೀಸ್, ಜಿಂಕ್, ಕ್ರೋಮಿಯಂ, ಕ್ಯಾಡ್ಮಿಯಂ, ಇನ್ನಿತರ ಲೋಹಾಂಶಗಳು ಸಹ ಇರುತ್ತವೆ. ಇದರಲ್ಲಿ ಬಿಒಡಿ(ಬಯಲಾಜಿಕಲ್ ಆಕ್ಸಿಜನ್ ಡಿಮ್ಯಾಂಡ್) ಮತ್ತು ಸಿಒಡಿ (ಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್) ಪ್ರಮಾಣವು ಕ್ರಮವಾಗಿ ಪ್ರತಿ ಲೀಟರ್ನಲ್ಲಿ 50,000 ಮಿ.ಗ್ರಾಂ ಮತ್ತು 1.0 ಲಕ್ಷ ಮಿ.ಗ್ರಾಂ ಇದ್ದು, ಇವು ಅಂತರ್ಜಲ ತಲುಪಿ ಅಂತರ್ಜಲವನ್ನೇ ಮಲಿನಗೊಳಿಸಿ ನಿರುಪಯುಕ್ತಗೊಳಿಸುವುದಲ್ಲದೆ, ಈ ಕಲುಷಿತ ನೀರನ್ನು ತಂಗಿಸುವ ವಿಸ್ತಾರವಾದ ಗುಂಡಿಗಳಿಂದ ಬರುವ ಗಬ್ಬು ವಾಸನೆ ಮನುಷ್ಯನ ಆರೋಗ್ಯ ಮತ್ತು ಸುತ್ತಲಿನ ಜೀವಿ ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ ಹಾಗೂ ಕೃಷಿ ಬೆಳೆಗಳಿಗೂ ಮಾರಕವಾಗುತ್ತದೆ.

ರಾಜ್ಯದಲ್ಲಿ ಯಾವುದೇ ಡಿಸ್ಟಿಲರಿ ಕೈಗಾರಿಕೆಗಳಿಗೆ ಭೇಟಿ ನೀಡಿದರೂ ಅಲ್ಲೆಲ್ಲ ಕಂಡುಬರುವುದೇನೆಂದರೆ ಕೇಂದ್ರೀಯ ಜಲಮಾಲಿನ್ಯ ನಿಯಂತ್ರಣ ಕಾಯಿದೆ ಮತ್ತು ವಾಯುಮಾಲಿನ್ಯ ನಿಯಂತ್ರಣ ಕಾಯಿದೆಗಳನ್ನು ನೇರವಾಗಿ ಉಲ್ಲಂಘಿಸಿರುವುದು ಗೋಚರವಾಗುತ್ತದೆ.

ಸಾರ್ವಜನಿಕ ಸಭೆಗಳು = ರಹಸ್ಯ ಸಭೆಗಳು!:
ಇಂಥಹದೊಂದು ಕೈಗಾರಿಕಾ ಘಟಕ ಸ್ಥಾಪನೆಯಾಗುವ ಮುನ್ನ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಿ ಜನಾಭಿಪ್ರಾಯ ಸಂಗ್ರಹಣೆ ಮಾಡಲು ಸಾರ್ವಜನಿಕ ಪರಿಸರ ಸಭೆಗಳನ್ನು ನಡೆಸಬೇಕೆಂಬ ನಿಯಮಾವಳಿಯಿದೆ. ಆದರೆ ಹಲವು ಕೈಗಾರಿಕಾ ಘಟಕಗಳು ಸ್ಥಳೀಯವಾಗಿ ಇಂಥಹ ಸಾರ್ವಜನಿಕ ಸಭೆಗಳನ್ನು ನಡೆಸದೇ ರಹಸ್ಯವಾಗಿಯೇನೋ ಎಂಬಂತೆ ನಡೆಸಿಕೊಳ್ಳುತ್ತವೆ ಇಲ್ಲದಿದ್ದಲ್ಲಿ ತಮ್ಮದೇ ಪುಂಡು ಜನರ ಗುಂಪೊಂದನ್ನು ಕರೆತಂದು ಸಾರ್ವಜನಿಕ ಅಭಿಪ್ರಾಯ ರೂಪುಗೊಳ್ಳಲು ಅವಕಾಶ ನೀಡದೆ, ಯೋಜನೆಯ ವಿರುದ್ದ ಅಭಿಪ್ರಾಯ ವ್ಯಕ್ತಪಡಿಸುವವರ ಮೇಲೆ ದಾಂದಲೆ ನಡೆಸುವ ಪರಿಪಾಟವೂ ಕೈಗಾರಿಕೆಗಳಿಗೆ ಚೆನ್ನಾಗಿ ಕರಗತವಾಗಿದೆ.

ಜೆಮಿನಿ ಡಿಸ್ಟಿಲರಿ ಕೈಗಾರಿಕೆಯ ಪರಿಸರ-ಹಾನಿ ಕೃತ್ಯಗಳು:

ಉದಾಹರಣೆಯಾಗಿ ನಂಜನಗೂಡಿನ ಜೆಮಿನಿ ಡಿಸ್ಟಿಲರಿ ಕೈಗಾರಿಕೆಯನ್ನು ಅವಲೋಕಿಸಿದಾಗ ಅದರಿಂದುಂಟಾಗಿರುವ ಹಾನಿಯಂತೂ ಎಂಥಹವರನ್ನು ಬೆಚ್ಚಿಬೀಳಿಸಬಲ್ಲದು. ದಿನವೊಂದಕ್ಕೆ ಸುಮಾರು 4.20 ಲಕ್ಷ ಲೀಟರ್ ಸ್ಪೆಂಟ್ ವಾಷ್ ಕಲುಷಿತ ನೀರನ್ನು ಉತ್ಪತ್ತಿ ಮಾಡುತ್ತಿರುವ ಈ ಕೈಗಾರಿಕೆಯು ಸುತ್ತಲಿನ ಪ್ರದೇಶದ ಅಂತರ್ಜಲವನ್ನು ಮಲಿನಗೊಳಿಸಿ, ಕೃಷಿಯೋಗ್ಯ ಭೂಮಿಯ ಫಲವತ್ತತೆಯನ್ನು ಹಾಳುಗೆಡವಿ ಸ್ಥಳೀಯ ರೈತರ ಒತ್ತಡದ ನಡುವೆ ಮತ್ತು ಕನರ್ಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗಳು ರದ್ದುಗೊಳಿಸಿರುವ ಪರವಾನಗಿಯಿಂದ ಹೈಕೋಟರ್್ನಿಂದ ತಡೆಯಾಜ್ಞೆ ತಂದು ಕಾಖರ್ಾನೆಯನ್ನು ನಡೆಸುತ್ತಲಿದೆ.ಚಿತ್ರ: ಡಿಸ್ಟಿಲರಿ ಕೈಗಾರಿಕೆಯ ಬಳಿಯಿರುವ ಗೀಕಳ್ಳಿ ಗ್ರಾಮದ ಬಾವಿಯ ನೀರು
ಪ್ರಂಟ್ಲೈನ್ ಪತ್ರಿಕೆಯು ದಾಖಲಿಸಿರುವಂತೆ, ಆ ಕಾಖರ್ಾನೆಯ ಸುತ್ತಲಿನ ಸುಮಾರು 270 ಎಕರೆ ಪ್ರದೇಶದ ಅಂತರ್ಜಲ ಮಲಿನಗೊಂಡು 20,000 ಜನರಿರುವ ಆ ಪ್ರದೇಶದ ಬೋರ್ವೆಲ್ಗಳಲ್ಲಿ ಕಂದು ಮಿಶ್ರಿತ ಕೆಂಪು ನೀರು ಬರುತ್ತಿದ್ದು ಕುಡಿಯಲು ಬಾರದಂತಾಗಿದೆ ಮತ್ತು ಕೃಷಿಗೂ ಯೋಗ್ಯವಲ್ಲದಾಗಿದೆ. ಈ ಪ್ರದೇಶವು ನೀರಾವರಿಯದ್ದಾಗಿರುವುದರಿಂದ ಕಲುಷಿತ ನೀರು ಬಲು ಸುಲಭವಾಗಿ ಮಣ್ಣಿನ ಮೂಲಕ ಅಂತರ್ಜಲ ಸೇರುತ್ತದೆ. ಈ ಕಾಖರ್ಾನೆ ಸ್ಥಾಪನೆಯಾದ ನಂತರದಲ್ಲಿ ಕಬ್ಬು ಮತ್ತು ಭತ್ತದ ಬೆಳೆಗಳ ಇಳುವರಿ ಮೊದಲಿಗಿಂತ ಬರೇ ಅರ್ಧದಷ್ಟು ಇಳುವರಿ ಸಿಗುತ್ತಿದೆ. ಗೀಕಳ್ಳಿ, ಗೀಕಳ್ಳಿ ಹುಂಡಿ, ಗೋಳೂರು, ಕೋಡಿ ನರಸಾಪುರ, ಮುಳ್ಳೂರು, ವಿದ್ಯಾಪೀಠ, ಬೆಂಡಗಳ್ಳಿ ಮತ್ತು ಚಿನ್ನಗುಂಡಿಹಳ್ಳಿ ಗ್ರಾಮಗಳು ಅತೀವ ತೊಂದರೆಯಲ್ಲಿರುವ ಗ್ರಾಮಗಳಾಗಿವೆ. ಗ್ರಾಮಸ್ಥರ ಒತ್ತಡದಿಂದಾಗಿ ಈ ಪ್ರದೇಶಗಳಿಗೆ ಕಾಖರ್ಾನೆಯೇ ಕುಡಿಯುವ ನೀರನ್ನು ಸದ್ಯಕ್ಕೆ ಸರಬರಾಜು ಮಾಡುತ್ತಿದೆ. ಈ ಪ್ರದೇಶದ ಜಾನುವಾರುಗಳನ್ನು ಚಿಕಿತ್ಸೆಗಾಗಿ ಕರೆತರಬಾರದೆಂದು ಸ್ಥಳೀಯ ಪಶುಸಂಗೋಪನಾ ವೈದ್ಯರು ಜನರಿಗೆ ಹೇಳುತ್ತಾರಂತೆ. ಡಿಸ್ಟಿಲರಿ ಕಲುಷಿತ ತ್ಯಾಜ್ಯ ನೀರು ವ್ಯವಸಾಯಕ್ಕೆ ಬಹಳ ಯೋಗ್ಯವೆಂದು ರೈತರನ್ನು ನಂಬಿಸಿ ಹಲವು ಪ್ರದೇಶಗಳಲ್ಲಿ ಬೆಳೆ ನಾಶಗೊಂಡಿದೆ. ಈ ಕೈಗಾರಿಕೆಗಳು ರಾತ್ರಿವೇಳೆ ಘಟಕದಿಂದ ಉತ್ಪತ್ತಿಯಾಗುವ ಕಲುಷಿತ ನೀರನ್ನು ಸುತ್ತಮುತ್ತಲ ಗದ್ದೆಗಳಿಗೋ ಕೆರೆ ಕಾಲುವೆಗಳಿಗೋ ಸಂಸ್ಕರಣೆ ಮಾಡದೆ ಬಿಟ್ಟುಬಿಡುತ್ತವೆ. ಈ ಭಾಗದ ಜಮೀನಿನಲ್ಲಿ ಕೇವಲ ಶೇ. 25ರಷ್ಟು ಮಾತ್ರವೇ ಇಳುವರಿ ಬರುವುದರಿಂದ ಕೃಷಿ ಸಾಲ ನೀಡಲು ಸಾಧ್ಯವಿಲ್ಲವೆಂದು ಕೆಲವು ಬ್ಯಾಂಕುಗಳು ಸಾಲ ವಿತರಣೆಯನ್ನು ನಿರಾಕರಿಸಿವೆ.

ಚಿತ್ರ: ಸ್ಪೆಂಟ್ ವಾಷ್ (ಕಲುಷಿತ ನೀರು) ಹರಿಯುತ್ತಿರುವುದು ಮತ್ತು ತಂಗಿಸಿರುವ ತೊಟ್ಟಿಗಳು.
ಬಯೋ-ಕಾಂಪೊಸ್ಟಿಂಗ್ ಗೊಬ್ಬರ ಕಾಖರ್ಾನೆಗಳಿಂದುಂಟಾಗುತ್ತಿರುವ ದುಷ್ಪರಿಣಾಮಗಳು:


ರಾಜ್ಯದಾದ್ಯಂತ ಅದರಲ್ಲೂ ವಿಶೇಷವಾಗಿ ಚಾಮುಂಡೇಶ್ವರಿ ಷುಗರ್ಸ್ ಕಂಪನಿಯು ಮಂಡ್ಯದ ಕೆ.ಎಂ.ದೊಡ್ಡಿ ಬಳಿಯ ಅಣ್ಣೂರಿನಲ್ಲಿ ಸ್ಥಾಪಿಸಿರುವ ಡಿಸ್ಟಿಲರಿ ಘಟಕ ಮತ್ತು ಮಳವಳ್ಳಿ ತಾಲ್ಲೂಕಿನ ನೆಟ್ಟಕಲ್ ಬಳಿ ಸ್ಥಾಪಿಸಿರುವ ಕಾಂಪೊಸ್ಟಿಂಗ್ ಘಟಕ, ಗೌರಿಬಿದನೂರಿನಲ್ಲಿರುವ ಗೌರಿ ಡಿಸ್ಟಿಲರಿಯ ಕಾಂಪೊಸ್ಟಿಂಗ್ ಘಟಕ, ನಂಜನಗೂಡಿನ ಜೆಮಿನಿ ಡಿಸ್ಟಿಲರಿಯವರ ಕಾಂಪೊಸ್ಟಿಂಗ್ ಘಟಕ, ಇವೆಲ್ಲ ಜ್ವಲಂತ ಉದಾಹರಣೆಗಳು ಕೆಳಕಂಡ ಅಪಾಯಗಳನ್ನು ಸಾಬೀತು ಮಾಡಿವೆ. ಕೇಂದ್ರ ಮತ್ತು ಕನರ್ಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗಳು ಇಂತಹ ಹೆಚ್ಚು ಮಲಿನಕಾರಕ ಕೈಗಾರಿಕೆಗಳನ್ನು ಕೆಂಪು ಪಟ್ಟಿಗೆ ಸೇರಿಸಿವೆ. ಡಿಸ್ಟಿಲರಿ ಕಾಖರ್ಾನೆಯ ಕಲುಷಿತ ನೀರು ಅಂತರ್ಜಲವನ್ನು ತಲುಪಿ ಎಲ್ಲ ಡಿಸ್ಟಿಲರಿ ಕೈಗಾರಿಕೆ ಮತ್ತು ಬಯೋ-ಕಾಂಪೋಸ್ಟಿಂಗ್ ಘಟಕಗಳ ಸುತ್ತಲಿನ ಅಂತರ್ಜಲವೆಲ್ಲ ಮಲಿನಗೊಂಡಿದೆ. ಕನರ್ಾಟಕ ಸಕರ್ಾರದ ಅರಣ್ಯ & ಪರಿಸರ ಇಲಾಖೆಯು ಹೊರತಂದಿರುವ ಪರಿಸರದ ಸ್ಥಿತಿಗತಿ, 2003 ರ ವರದಿಯಲ್ಲಿ ದಾಖಲಿಸಿರುವಂತೆ, ಡಿಸ್ಟಿಲರಿ ಕಾಖರ್ಾನೆಯ ಸ್ಪೆಂಟ್ ವಾಷ್(ಕಲುಷಿತ) ನೀರನ್ನು ಸಂಸ್ಕರಣೆ ಮಾಡಲು ಬಳಸುತ್ತಿರುವ ಕಾಂಪೋಸ್ಟಿಂಗ್ ವಿಧಾನವು ಬಹುಮಟ್ಟಿಗೆ ನ್ಯೂನತೆಗಳನ್ನು ಹೊಂದಿರುವ ತಂತ್ರಜ್ಞಾನವಾಗಿದೆ. ಆದರೆ, ಬಹುತೇಕ ಡಿಸ್ಟಿಲರಿ ಕೈಗಾರಿಕೆಗಳು ಕಡಿಮೆ ವೆಚ್ಚದ ತಂತ್ರಜ್ಞಾನವಾದ್ದರಿಂದ ಇದೇ ವಿಧಾನವನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಉತ್ಸುಕತೆ ತೋರಿಸುತ್ತವೆ. ಸೋಡಿಯಂ ಲವಣಗಳು, ಸಸ್ಪೆಂಡೆಡ್ ಕಣಗಳು, ಟ್ಯಾನಿನ್ಸ್ಗಳು, ಪ್ರಧಾನ ಮಲಿನಕಾರಕಗಳಾಗಿದ್ದು ಇವು ಈ ಕಾಖರ್ಾನೆಗಳಲ್ಲಿ ಕೆಲಸ ಮಾಡುವ ಕಾಮರ್ಿಕರಿಗೆ ಮತ್ತು ಸುತ್ತಮುತ್ತಲು ವಾಸಿಸುವ ಜನರಿಗೆ ಉಸಿರಾಟದ ತೊಂದರೆಗಳು ಸೇರಿದಂತೆ ಬ್ರಾಂಚಿಟಿಸ್, ಇಂಟರ್ಸ್ಟಿಷಿಯಲ್ ನ್ಯೂಮೋನಿಯ, ಲಿಪಿಡ್ ನ್ಯೂಮೋನಿಯಾಸ್ ಗಳಂಥಹ ಕಾಯಿಲೆಗಳನ್ನು ತರುತ್ತದೆ. ಇಂಥಹ ಕೈಗಾರಿಕೆಗಳನ್ನು ಜನವಸತಿ ಕೇಂದ್ರಗಳಿಂದ ಹಾಗೂ ಕೆರೆ, ಕಾಲುವೆಗಳಿಂದ ಅತಿ ದೂರದಲ್ಲಿ ಸ್ಥಾಪಿಸುವುದೊಂದೇ ಸದ್ಯಕ್ಕೆ ಲಭ್ಯವಿರುವ ಪರಿಹಾರ. ಅಂತರ್ಜಲ ಮಾಲಿನ್ಯದಿಂದ ಅಲ್ಲಿನ ಬೋರ್ವೆಲ್ನಲ್ಲಿ ಕೆಂಪು ಕಲುಷಿತ ನೀರು ಬಂದು ನೀರು ಕುಡಿಯಲು ಬಾರದಂತಾಗಿದೆ. ಮಣ್ಣು ಫಲವತ್ತತೆ ಕಳೆದುಕೊಂಡು ಕೃಷಿಗೆ ಬಾರದಂತಾಗಿದೆ. ವಿಷಕಾರಿ ವಾಸನೆಯಿಂದ ವಾತಾವರಣದ ಗಾಳಿ ಮಾರಣಾಂತಿಕವಾಗಿದೆ. ಜನರಿಗೆ ತಲೆನೋವು, ಚರ್ಮರೋಗ, ಮಾನಸಿಕ ಅಸ್ವಸ್ಥತೆ ಉಂಟಾಗುತ್ತಿದೆ. ಭತ್ತ, ಕಬ್ಬು ಹಾಗೂ ರೇಷ್ಮೆ ಬೆಳೆಗೆ ರೋಗ ಬಂದು ಅದರ ಇಳುವರಿ ಸ್ಥಗಿತಗೊಳ್ಳುತ್ತಿದೆ. ಹುಟ್ಟುವ ಮಕ್ಕಳು ವಾಸನೆಯಿಂದಾಗಿ ಹಾಲು ಕುಡಿಯುವುದಿಲ್ಲ ಹಾಗೂ ಮನುಷ್ಯರು ಅಸ್ವಸ್ಥರಾಗುತ್ತಾರೆ. ದನಕರುಗಳು ಕಲುಷಿತ ನೀರು ಕುಡಿದು ಸಾಯುತ್ತಿವೆ. ಶಾಲೆಗಳಲ್ಲಿ ಮಕ್ಕಳು ಪಾಠ ಕೇಳಲಾಗುವುದಿಲ್ಲ ಹಾಗೂ ಶಿಕ್ಷಕರು ವರ್ಗ ಮಾಡಿಸಿಕೊಂಡು ಊರು ಬಿಡುತ್ತಿದ್ದಾರೆ.
ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳು ಪರಿಸರ ಮಾಲಿನ್ಯ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಪರಿಸರ ಸಂರಕ್ಷಣೆಯೆಂಬುದು ನಿಯಂತ್ರಣಕ್ಕೆ ಸಿಗದಂತಾಗುವುದರಲ್ಲಿ ಸಂದೇಹವಿಲ್ಲ.
ಆಧಾರ:
1) ಸ್ಟೇಟ್ ಆಫ್ ದಿ ಎನ್ವಿರಾನ್ಮೆಂಟ್ ರಿಪೋಟರ್್ ಅಂಡ್ ಆಕ್ಷನ್ ಪ್ಲಾನ್ - 2003, ಅರಣ್ಯ ಮತ್ತು ಪರಿಸರ ಇಲಾಖೆ, ಕನರ್ಾಟಕ ಸಕರ್ಾರ.
2) ಡಿಸ್ಟಿಲರ್ ಕಾಖರ್ಾನೆಯ ಸ್ಥಿತಿಗತಿ ಅಧ್ಯಯನ ವರದಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ನವದೆಹಲಿ.
3) ಡಿಸ್ಟಿಲರ್ ಕಾಖರ್ಾನೆಯ ಕುರಿತಾದ ವರದಿ, ಡಾ: ಹೆಚ್.ಸಿ ಜೋಷಿ, ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ (ಯುಎನ್ಡಿಪಿ).
4) ಪ್ರಂಟ್ ಲೈನ್ ಆಂಗ್ಲ ಮ್ಯಾಗಜೈನ್ ಪತ್ರಿಕೆ, ಮೇ 08-21, 2004.

No comments: